ಪ್ರಸಾದ್ ಸ್ಟುಡಿಯೋದಲ್ಲಿ ?ವೀರಬಾಹು ಮಾತು
Posted date: 15/November/2010

    ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಿಸುತ್ತಿರುವ ‘ವೀರಬಾಹು ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಭರದಿಂದ ಸಾಗಿದ್ದು, ಮುಂದಿನ ತಿಂಗಳು ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ. 
     ಎಸ್.ಮಹೇಂದರ್ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಕರುನಾಡ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
     ಅನಂತ್ ಅರಸ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ದೀಪು ಎಸ್ ಕುಮಾರ್ ಸಂಕಲನ, ಪ್ರಸಾದ್ ಸಹ ನಿರ್ದೇಶನ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ವಿಜಯಕುಮಾರ್ ನಿರ್ಮಾಣ ನಿರ್ವಹಣೆಯಿರುವ ‘ವೀರಬಾಹು ಚಿತ್ರದ ತಾರಾಬಳಗದಲ್ಲಿ ವಿಜಯ್, ನಿಧಿಸುಬ್ಬಯ್ಯ, ರಂಗಾಯಣರಘು, ರಾಜುತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮೀದೇವಿ, ಎ.ಟಿ.ರಘು, ಅಚ್ಯುತ್‌ಕುಮಾರ್, ರೇಖಾಕುಮಾರ್, ಧರ್ಮ, ಕಿಶೋರಿಬಲ್ಲಾಳ್, ವಿನಯಪ್ರಸಾದ್ ಮುಂತಾದವರಿದ್ದಾರೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed